ಶ್ರೀ ಜಿ. ಎಸ್. ಪಾಟೀಲ: ಅಧ್ಯಕ್ಷರು, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ, ಶಾಸಕರು ರೋಣ ವಿಧಾನಸಭಾ ಕ್ಷೇತ್ರ, ಗದಗ ಜಿಲ್ಲೆ
ಶ್ರೀ ಜಿ. ಎಸ್. ಪಾಟೀಲ (G S Patil) ಅವರು ರೋಣವನ್ನ ಬರಿ ಮತಕ್ಷೇತ್ರವನ್ನಾಗಿ ನೋಡದೆ, ರೋಣ ಮತ್ತು ರೋಣದ ಜನರನ್ನ ಬಂಧು-ಮಿತ್ರರಂತೆ ಕಾಣುವ ಜನಪ್ರೇಮಿ, ಅಜಾತ ಶತ್ರು ಹಾಗು ಜನಾನುರಾಗಿ ಶ್ರೀ ಜಿ. ಎಸ್. ಪಾಟೀಲ. ಜನರ ಸಾಮಾಜಿ, ಆರ್ಥಿಕ ಹಾಗು ಶೈಕ್ಷಣಿಕ ಕುಂದು ಕೊರತೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸುವುದು ದಿನಚರಿ. ಬೆಳಗಿನಿಂದ ಸಾಯಂಕಾಲದವರೆಗೂ ದಣಿವ ಮರೆತು ಪ್ರತಿಯೋಬ್ಬರನ್ನು ಭೇಟಿಯಾಗಿ ಸ್ವತಃ ಕುಂದುಕೊರತೆಗಳನ್ನು ಆಲಿಸುತ್ತಾರೆ. ಸದಾ ಜನರ ಹಾಗು ಕ್ಷೇತ್ರದ ಅಭಿವ್ರದ್ಧಿಯ ಬಗ್ಗೆ ಯೋಚಿಸುವ ಶ್ರೀ ಜಿ. ಎಸ್. ಪಾಟೀಲ-G S Patilರು(G.S. Patil) ಜನಮೆಚ್ಚಿದ ನಾಯಕ.
ಸಾಮಾಜಿಕ ಕಾರ್ಯಗಳು:
ಸದಾ ದೀನ, ದಲಿತ ಹಾಗು ಅವಕಾಶವಂಚಿತರ ಬಗ್ಗೆ ವಿಶೇಶ ಕಾಳಜಿ ಹೊಂದಿರುವ ಜನಪ್ರೇಮಿ. ಮಹಾಶಾಸನ, ಪೆನ್ಶನ್, ಪರಿಹಾರಗಳು, ಬರಪರಿಹಾರಗಳ ಅಹವಾಲುಗಳನ್ನ ಆಲಿಸಿ ಪರಿಹರಿಸುವ ಸರಳ ರಾಜಕಾರಣಿ. ಹಿಂದುಳಿದ, ಅಲ್ಪಸಂಕ್ಯಾತ, ದಲಿತರ ಸಾಮಾಜಿಕ ಏಳ್ಗೆಗಾಗಿ ಹಲವಾರು ಸರ್ಕಾರದ ಯೋಜನೆಗಳನ್ನ ಜನತೆಗೆ ತಲುಪಿಸುವ ಕಾರ್ಯವನ್ನ ರೋಣ ಮತಕ್ಷೇತ್ರದಲ್ಲಿ ನಿರಂತರವಾಗಿ ಕೈಗೊಂಡಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿಯ ಕಾರ್ಯಗಳು:
ಆಧ್ಯಕ್ಷರು:
"ರಾಜಿವ ಗಾಂಧಿ ಎಜುಕೇಶನ್ ಸೊಸ್ಯಟಿ, ರೋಣ (RON,GADAG DISTRICT)"-ದಿವಂಗತ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ ಪ್ರೇರಣೆಯಿಂದ ಪ್ರಾರಂಭವಾದ ಶೈಕ್ಷಣಿಕ ಸಂಸ್ಥೆ. ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಹಲವು ಶಿಕ್ಷಣ ಸಂಸ್ಥೆಗಳು.
1. ಆಯುರ್ವೆದಿಕ ಮೆಡಿಕಲ್ ಕಾಲೆಜ್ ಹಾಸ್ಪಿಟಲ್ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರ.
2. ವೀರರಾಣಿ ಚೆನ್ನಮ್ಮಾ ಬಾಲಕಿಯರ ಮಾಧ್ಯಮಿಕ ಶಾಲೆ.
3. ಬಿ.ಎಡ್ ಕಾಲೆಜ್.
4. ಡಿ.ಎಡ್ ಕಾಲೆಜ್.
5. ವೀರರಾಣಿ ಚೆನ್ನಮ್ಮಾ ಕಾಂಪೋಸಿಟ ಜೂನಿಯರ ಕಾಲೆಜ್.
6. ಐ.ಟಿ.ಐ ಕಾಲೆಜ್.
7. ಬಿಪಿ.ಎಡ್. ಕಾಲೆಜ್
8. ಮಾತೋಶ್ರೀ ಬಸಮ್ಮಾ ಎಸ್ ಪಾಟಿಲ್ ಪ್ರಿ ಪ್ರೈಮರಿ ಸ್ಕೂಲ್.
9. ಜಾಬ್ ಓರಿಯೆಂಟೆಡ್ ಸೆರ್ಟಿಫಿಕೇಟ್ ಕೋರ್ಸ.
ಸೆಕ್ರೆಟರಿ ಪುಟ್ಟರಾಜ ಗವಾಯಿ ಅಂಧರ ಶಿಕ್ಷಣ ಸಂಸ್ಥೆ:
ಪುಟ್ಟರಾಜ ಗವಾಯಿ(Puttaraja Gavai) ಅಂಧರ ಶಿಕ್ಷಣ ಸಂಸ್ಥೆಯ ಸೆಕ್ರೆಟರಿಯಾಗಿ ಗುರುಗಳ ಆಶೀರ್ವಾದದಿಂದ ಕರ್ನಾಟಕದಲ್ಲೇ ಪ್ರಥಮಬಾರಿಗೆ ಅಂಧ ಅನಾಥರಿಗಾಗಿ ಸಂಗೀತ ಶಾಲೆ, ಕಾಲೆಜು ಹಾಗು ಹಾಸ್ಟೆಲ ಗಳನ್ನು ಸ್ಥಾಪಿಸಿ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವನಿಟ್ಟಿನಲ್ಲಿ ಕೆಲಸಮಾಡಿದ್ದಾರೆ. ಆದೆ ರೀತಿ ಪ್ರಾಥಮಿಕ, ಮಾಧ್ಯಮಿಕ ಶಾಲೆ, ಸಂಸ್ಕøತ ಪಾಠಶಾಲೆ, ಬಿ.ಎಡ್, ಡಿ.ಎಡ್, ಪಿ.ಯು.ಸಿ ಹಾಗು ಡಿಗ್ರಿ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಹಲವು ಕೈಂಕರ್ಯಗಳನ್ನ ಇನ್ನಿತರ ಸಂಸ್ಥೆ ಗಳಲ್ಲಿ ವಿವಿಧ ಹುದ್ದೆಗಳಾದ, ಟ್ರಸ್ಟಿ, ಶ್ರೀ ಮದ್ವೀರಶೈವ ಶಿವಯೋಗಮಂದಿರ (Shivayogamandira) ಸಂಸ್ಥೆ ಉಪಾಧ್ಯಕ್ಷರು, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ
ಹಲವಾರು ಶಾಲೆ, ಕಾಲೆಜುಗಳನ್ನು ಸ್ಥಾಪಿಸಿ ಸಮಾಜಕ್ಕೆ ಶಿಕ್ಷಣ ದಾಸೋಹವನ್ನು ಮಾಡುತ್ತಲಿದ್ದಾರೆ.
ಆರ್ಥಿಕ ಅಭಿವೃದ್ಧಿಯ ಸಂಕಲ್ಪ:
1983 ರಲ್ಲಿ ರೋಣ ಶಹರದ ಮುನ್ಸಿಪಾಲಿಟಿಯಲ್ಲಿ ಜಯ ಗಳಿಸುವುದರ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಶ್ರೀಯುತರು, ಇಂದಿಗೆ ಮೂರು ಬಾರಿ ರೋಣ ಕ್ಷೇತ್ರದ ಜನತೆಯ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಜನರ ನೆಚ್ಚಿನ ನಾಯಕರಾಗಿದ್ದಾರೆ.
- ಅದೆರೀತಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ, 1995 ರಲ್ಲಿ ಬಾಗಲಕೋಟೆ ಜಿಲ್ಲೆಯ 7 ಶಾಸಕರನ್ನು ಆರಿಸಿತರುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ಥಿಕಾಭಿವೃದ್ಧಿಗೆ ಕೈಕೊಂಡ ಕ್ರಮಗಳು ಹಲವಾರು, ಕ್ಷೇತ್ರದ ಎಲ್ಲ ಸಮುದಾಯದ ಜನರ ಹಿತಕಾಪಾಡುತ್ತ ಹಲವು ಜನಪರ ಕಾರ್ಯಗಳನ್ನು ಅನುಷ್ಟಾನಗೊಳಿಸಿದ್ದಾರೆ.
- ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಹಾವೇರಿ ಹಾಗು ಬ್ಯಾಡಗಿ ತಾಲುಕ ಗಳಲ್ಲಿ 200000 ಮೆಟ್ರಿಕ ಟನ್ ಸಾಮಥ್ಯದ ಶೀತ ಉಗ್ರಾಣಜಳನ್ನು ಕಟ್ಟಸಿ ರೈತರ ಬಾಳನ್ನು ಹಸನಾಗಿಸಿದ್ದಾರೆ.
- 5000 ಸೋಲಾರ್ ಲ್ಯಾಂಪುಗಳನ್ನು ಗ್ರಾಮಗಳಲ್ಲಿ ಹಂಚುವ ವ್ಯವಸ್ಥೆ ಮಾಡಿ ಗ್ರಾಮೀಣ ವಿದ್ಯಾರ್ಥಿಗಳ ಬಾಳು ಬೆಳಕಾಗಿಸಿದ್ದಾರೆ.
- ನೂರಾರು ಮಕ್ಕಳು ಮರಳಿ ಶಾಲೆಗೆ ಸೇರುವಂತೆಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
- "ಸರ್ವಶಿಕ್ಷಣ ಅಭಿಯಾನದ" ಅಡಿಯಲ್ಲಿ ತಮ್ಮ ಇಚ್ಛಾಶಕ್ತಿಯ ಫಲವಾಗಿ ಡಿ.ಪಿ.ಇ.ಪಿ ಸೆಂಟರನ್ನು ಸ್ಥಾಪಿಸಿದ್ದಾರೆ.
- ತಮ್ಮ ಎಮ್.ಎಲ್.ಎ ಫಂಡನಲ್ಲಿ ಹಲವಾರು ಶಾಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ನರೇಗಲ್, ಸೂಡಿ, ಅಬ್ಬಿಗೇರಿ, ಹಿರೇಹಾಳ, ಹೋಳೆಆಲೂರ ಹಾಗು ಮುಷಿಗೇರಿಗಳಲ್ಲಿ "ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ" ಗಳಿಗಾಗಿ ಹಾಸ್ಟೆಲಗಳನ್ನು ಕಟ್ಟಿಸಿದ ಭಾಗ್ಯ ಇವರಾದಾಗಿದೆ.
- ಭೀಕರ ಬರಗಾಲದ ಸಮಯದಲ್ಲಿ "ಒಂದುಸಾವಿರ ಕೆರೆಗಳನ್ನು" ಕ್ಷೇತ್ರದ ಜನರಿಗಾಗಿ ಕಟ್ಟಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ, ಜನರು ಅಕ್ಕರೆಯಿಂದ "ಸಾವಿರ ಕೆರೆಗಳ ಸರದಾರ" ಎಂಬ ಬಿರುದನ್ನಿತ್ತು ಗೌರವಿಸಿದ್ದಾರೆ.
- ಕ್ಷೇತ್ರದತುಂಬೆಲ್ಲಾ ಅಧುನಿಕ ಸಮಾಜಕ್ಕೆ, ಅಭಿವೃದ್ಧಿಗೆ ಬೇಕಾಗುವ ಸಾರಿಗೆ ಸೌಕರ್ಯ, ಕೆರೆ-ಕಟ್ಟೆಗಳು, ವಿದ್ಯುತ್‍ಶಕ್ತಿ, ರಸ್ತೆ ಅಭಿವೃದ್ಧಿ ಹಾಗು ಮುಂತಾದ ಹಲವಾರು ಕಾರ್ಯಗಳನ್ನು ಜನರಿಗಾಗಿ ಜಾರಿಗೆ ತಂದಿದ್ದಾರೆ.
Bright Focuss
brightfocuss.com@gmail.com
Comments
Post a Comment